ಟ್ರಿಪ್ಟೊಫೇನ್
	ಪ್ರೋಟೀನುಗಳಲ್ಲಿರುವ ಅಮೈನೋ ಆಮ್ಲ. ರಾಸಾಯನಿಕ ಹೆಸರು ಇಂಡೋಲ್ ಅಲಾನಿನ್. ಇಂಡೋಲ್ ಚಕ್ರವಿರುವುದರಿಂದ ಇದು 279m( ನಲ್ಲಿ ಅತ್ಯಂತ ಹೆಚ್ಚಿನ ಅವಶೋಷಣೆಯನ್ನು ಪ್ರದರ್ಶಿಸುತ್ತದೆ. ಟ್ರಿಪ್ಟೊಫೇನನ್ನು ಹಾಪ್‍ಕಿನ್ಸ್-ಕೋಲ್ ಕ್ರಿಯೆಯಿಂದ ಗುರುತಿಸಬಹುದು. ಇದರಲ್ಲಿ ಟ್ರಿಪ್ಟೊಫೇನ್ ಅಥವಾ ಅದನ್ನು ಒಳಗೊಂಡಿರುವ ವಸ್ತುವನ್ನು ಗ್ಲೈಆಕ್ಸಲಿಕ್ ಆಮ್ಲದಿಂದ ಸಂಸ್ಕರಿಸಿ ದೊರೆಯುವ ಫಲಿತಕ್ಕೆ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಲಾಗುವುದು. ಪ್ರಯೋಗಶಾಲೆಯು ಉಷ್ಣತೆಯಲ್ಲಿ ಗಾಢವಾದ ಊದಾ ಅಥವಾ ನೇರಿಳೆ ಬಣ್ಣ ನಿಧಾನವಾಗಿ ಕಂಡುಬರುತ್ತದೆ. ಈ ವರ್ತನೆಯ ಆಧಾರದ ಮೇಲೆ ಪ್ರೋಟೀನುಗಳನ್ನು ಗುರುತಿಸಲಾಗುತ್ತಿದೆ. ಟ್ರಿಪ್ಟೊಫೇನ್ ಮಾನವನ ದೇಹದಲ್ಲಿ ಸಂಶ್ಲೇಷಿಸುತ್ತವೆ. ಇದರ ಅಪಚಯದಿಂದ ವಿವಿಧರೀತಿಯ ಹಾಗೂ ಮುಖ್ಯವಾದ ಅನೇಕ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ. ಸಸ್ತನಿಗಳ ನರಕೋಶಗಳಲ್ಲಿರುವ ಮತ್ತು ರಕ್ತನಾಳಗಳನ್ನು ಸಂಕೋಚನಗೊಳಿಸುವ ಗುಣವುಳ್ಳ ಸೆರಾಟೋನಿನ್ ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾದ ಇಂಡೋಲ್ ಅಸಿಟಿಕ್ ಆಮ್ಲ, ಕೆಲವು ಕೀಟಗಳ ಕಣ್ಣಿನ ಬಣ್ಣಗಳು ಮತ್ತು ಜೀವಸತ್ವ ನಿಕೋಟಿನಿಕ್ ಆಮ್ಲ-ಇವು ಟ್ರಿಪ್ಟೊಫೇನಿನಿಂದ ದೊರೆಯುವ ವಸ್ತುಗಳಲ್ಲಿ ಕೆಲವು. ಟ್ರಿಪ್ಟೊಫೇನ್ ಹಲವಾರು ಕ್ರಿಯೆಗಳಿಗೆ ಒಳಗಾಗಿ ಚಯಾಪಚಯ ಕ್ರಿಯೆಗೆ ಅತ್ಯವಶ್ಯ ವಸ್ತುಗಳಲ್ಲಿ ಒಂದಾದ ನಿಕೋಟೀನ್ ಅಡಿನೈನ್ ಡೈ ನ್ಯೂಕ್ಲಿಯೋಟೈಡನ್ನು (ಓಂಆ+) ಕೊಡುತ್ತದೆ. 
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ